ಮಹಾಬಲಿಪುರಂನ ಸ್ಮಾರಕಗಳ ಸಮೂಹವು ಭಾರತದ ತಮಿಳು ನಾಡು ರಾಜ್ಯದ ಕೋರಮಂಡಲ್ ಕರಾವಳಿಯಲ್ಲಿ ಚೆನ್ನೈ ನಗರದಿಂದ ೬೫ ಕಿ.ಮೀ. ದಕ್ಷಿಣದಲ್ಲಿದೆ. ಪಲ್ಲವ ಅರಸರಿಂದ ಪ್ರತಿಷ್ಠಾಪಿಸಲ್ಪಟ್ಟ ಇವುಗಳ ಕಾಲ ೭ರಿಂದ ೮ನೆಯ ಶತಮಾನ. ಮುಖ್ಯವಾಗಿ ಶಿವನನ್ನು ಸ್ತುತಿಸುವ ಶಿಲ್ಪಗಳನ್ನು ಒಳಗೊಂಡ ಇಲ್ಲಿನ ದೇವಾಲಯಗಳು, ಮಂಟಪಗಳು ಮತ್ತು ರಥಗಳಿಗೆ ಮಹಾಬಲಿಪುರಂ ಹೆಸರಾಗಿವೆ. ಇಲ್ಲಿ ಹೆಚ್ಚಿನ ಗುಡಿಗಳನ್ನು ರಥದ ಆಕಾರದಲ್ಲಿ ನಿರ್ಮಿಸಲಾಗಿದೆ.